ಮೈನವಿರೇಳಿಸುವ ಕರ್ನಾಟಕದ 7 ಟ್ರಕ್ಕಿಂಗ್ ಸ್ಪಾಟ್

ಮೈನವಿರೇಳಿಸುವ ೭ ಟ್ರೆಕಿಂಗ್ ತಾಣಗಳು

ನೀವು ನೋಡಲೇಬೇಕಾದ ಕರ್ನಾಟಕದ 7 ಅತ್ಯದ್ಭುತ ಟ್ರಕ್ಕಿಂಗ್ ಸ್ಪಾಟ್

ಕರ್ನಾಟಕದಲ್ಲಿ ಟ್ರೆಕ್ಕಿಂಗ್‌ ಸ್ಥಳಗಳು ಇನ್ನಿಲ್ಲದ ಅನುಭವ ನೀಡುತ್ತವೆ. ಉತ್ಸಾಹ ಮತ್ತು ಅರಣ್ಯವನ್ನು ಅನುಭವಿಸಲು ಬಯಸುವ ಪ್ರಕೃತಿ ಪ್ರಿಯರಿಗೆ ರಾಜ್ಯವು ಹಲವಾರು ಚಾರಣ ಹಾದಿಗಳನ್ನು ಹೊಂದಿದೆ. ಜೊತೆಗೆ, ಟ್ರೆಕ್ಕಿಂಗ್ ಹಾದಿಗಳು ಸಾಹಸದಿಂದ ತುಂಬಿವೆ. ಆಹ್ಲಾದಕರ ಹವಾಮಾನ ಮತ್ತು ಸುಂದರವಾದ ಸುತ್ತಮುತ್ತಲಿನ ಪ್ರದೇಶಗಳು ಕರ್ನಾಟಕದ ಪ್ರತಿ ಚಾರಣಕ್ಕೂ ಪಾದಯಾತ್ರಿಗಳಿಗೆ ಅನನ್ಯ ಅನುಭವವನ್ನು ನೀಡುತ್ತದೆ. ಅದರಲ್ಲಿಯೂ ಕರ್ನಾಟಕದ 7 ಅತ್ಯದ್ಭುತ ಟ್ರಕ್ಕಿಂಗ್ ತಾಣಗಳು ನಿಮ್ಮನ್ನು ಬೇರೆ ಲೋಕಕ್ಕೆ ಕೆರೆದುಕೊಂಡು ಹೋಗುದರಲ್ಲಿ ಸಂದೇಹವಿಲ್ಲ.

ಭವ್ಯವಾದ ನೈಸರ್ಗಿಕ ಸೌಂದರ್ಯದ ನಡುವೆ ಈ ಹಾದಿಗಳಲ್ಲಿ ಟ್ರೆಕ್ಕಿಂಗ್ ನಗರದಿಂದ ಹೊರಬರಲು ಮತ್ತು ಪ್ರಕೃತಿಯ ಮಡಿಲಲ್ಲಿ ಹೋಗಲು ಪರಿಪೂರ್ಣ ಮಾರ್ಗವಾಗಿದೆ. (These 7 Beautiful Places Of Karnataka You Must Visit)

ಕುಮಾರ ಪರ್ವತ

ಕುಮಾರ ಪರ್ವತವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಒಂದು ಬೆಟ್ಟವಾಗಿದೆ. ಇದು ಕೂರ್ಗ್‌ನ ಎರಡನೇ ಅತಿ ಎತ್ತರದ ಶಿಖರವಾಗಿದ್ದೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಟ್ರೆಕಿಂಗ್ ಪ್ರಾರಂಭವಾಗುತ್ತದೆ, ಶೇಷ ಪರ್ವತವನ್ನು ದಾಟಿ, ಕುಮಾರ ಪರ್ವತದಲ್ಲಿ ಕೊನೆಗೊಳ್ಳುತ್ತದೆ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಮತ್ತು ಕುಮಾರ ಪರ್ವತದ ಹಚ್ಚ ಹಸಿರಿನ ನಡಿಗೆಯನ್ನು ಉತ್ತಮಗೊಳಿಸುತ್ತದೆ. ಬೆಂಗಳೂರಿನಿಂದ 260 ಕಿಲೋಮೀಟರ್ ದೂರವಿದ್ದು ಬಸ್,ರೈಲು ಮತ್ತು ಸ್ವಂತ ವಾಹನದ ಮೂಲಕ ತಲುಪಬಹುದು. ರೈಲಿನಲ್ಲಿ ಪ್ರಯಾಣಿಸುವವರು ಕುಕ್ಕೆ ಸುಬ್ರಮಣ್ಯ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕುಮಾರ ಪರ್ವತದ ಹತ್ತಿರ ತಲುಪಬಹುದು.

ಬೆಂಗಳೂರಿನಿಂದ 260 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 22 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಫೆಬ್ರವರಿ

ತಡಿಯಾಂಡಮೋಲ್

ತಡಿಯಾಂಡಮೋಲ್ ಕರ್ನಾಟಕದ ಟ್ರೆಕ್ಕಿಂಗ್‌ಗೆ ಪ್ರಸಿದ್ಧವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಮೂರನೇ ಅತಿ ಎತ್ತರದ ಶಿಖರ ಹಾಗು ಕಕ್ಕಬೆ ಪಟ್ಟಣದಿಂದ 8 ಕಿಮೀ ಮತ್ತು ಮಡಿಕೇರಿಯಿಂದ ಸರಿಸುಮಾರು 35 ಕಿಮೀ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರಿಗೆ ಉತ್ತಮ ವಿಹಾರ ತಾಣವಾಗಿದೆ. ಆಗಾಗ ಸಿಗುವ ಸಣ್ಣ ನೀರಿನ ತೊರೆಗಳ ಮೂಲಕ ನಡೆಯುತ್ತ ಸಾಗಿದರೆ ಮನಸ್ಸಿಗೆ ನಿರಾಳತೆಯ ಭಾವ ಮೂಡುತ್ತದೆ. ಸುತ್ತಮುತ್ತಲಿನ ಹಸಿರು ಹಾಸಿಗೆಯಂತೆ ಇರುವ ಬೆಟ್ಟ ಗುಡ್ಡಗಳು ಕಣ್ಮನ ಸೆಳೆಯುತ್ತದೆ.

ಬೆಂಗಳೂರಿನಿಂದ 267 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 14 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್ ನಿಂದ ಮೇ

ಕೊಡಚಾದ್ರಿ

ಕೊಡಚಾದ್ರಿ ಟ್ರೆಕ್ಕಿಂಗ್ ಸ್ಥಳವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಚಾರಣದ ಅನುಭವಗಳ ನೆನಪು ನಿಮ್ಮ ಜೀವನದ ಕೊನೆಯವರೆಗೂ ನಿಮ್ಮ ಹೃದಯದಲ್ಲಿ ಹಾಗೆ ಉಳಿಯುತ್ತದೆ. ಈ ಶಿಖರವು ರಮ್ಯ ಮನೋಹರವಾಗಿದ್ದು, ಶಂಕರಾಚಾರ್ಯರು ಧ್ಯಾನ ಮಾಡಿದ ಸ್ಥಳ ಮೈ ಜುಮ್ಮ್ ಎನಿಸುತ್ತದೆ. ಆಕಾಶದೆತ್ತರಕ್ಕೆ ಎದ್ದು ನಿಂತಿರುವ ಹಸಿರು ಹೊದಿಕೆಯ ಬೆಟ್ಟಗಳು ಮನ ಮುಟ್ಟುತ್ತದೆ. ಟ್ರೆಕಿಂಗ್ ಹೋಗಲು ಆಗದವರು ಜೀಪಿನ ಸಹಾಯದಿಂದ ಶಿಖರಕ್ಕೆ ತಲುಪಬಹುದು. ದೇವರಲ್ಲಿ ನಂಬಿಕೆ ಇರುವವರು ಹತ್ತಿರದ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯುವುದನ್ನು ಮರೆಯದಿರಿ.

ಬೆಂಗಳೂರಿನಿಂದ 407 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 22 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಫೆಬ್ರವರಿ

ಕುದುರೆಮುಖ ಟ್ರೆಕ್

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿರುವ ಕುದುರೆಮುಖ ಒಂದು ಸುಂದರವಾದ ಸ್ಥಳವಾಗಿದೆ. ಕುದುರೆಯ ಮುಖದಂತೆ ಕಾಣುವ ಶಿಖರವಾಗಿದ್ದೂ ಇಲ್ಲಿಗೆ ಕುದುರೆ ಮುಖ ಎಂಬ ಹೆಸರು ಬಂತು. ಈ ಶಿಖರವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಬರುತ್ತದೆ, ಇದು ಎರಡನೇ ಅತಿದೊಡ್ಡ ವನ್ಯಜೀವಿ-ರಕ್ಷಿತ ಪ್ರದೇಶವಾಗಿದೆ. ಕುದುರೆಮುಖ ತಲುಪುವ ವರೆಗೂ ನಿಮಗೆ ಸಣ್ಣ ಸಣ್ಣ ತೊರೆಗಳು, ಹುಲ್ಲುಗಾವಲುಗಳು ಮತ್ತು ಹಚ್ಚ ಹಸಿರಿನ ಮರಗಿಡಗಳು ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಜಿಂಕೆ, ನವಿಲುಗಳು ಮತ್ತು ಇತರ ವನ್ಯಜೀವಿಗಳನ್ನು ಸಹ ಗುರುತಿಸುವಿರಿ.

ಬೆಂಗಳೂರಿನಿಂದ 330 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 18 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಚಳಿಗಾಲ ಮತ್ತು ಮಾನ್ಸೂನ್

ಬೆಂಗಳೂರಿನ ಈ ಹತ್ತು ಹೋಟೆಲಿಗೆ ಹೋಗಿಲ್ಲ ಅಂದ್ರೆ ನೀವು ಸಸ್ಯಾಹಾರಿ ಆಗಿಯೂ ಪ್ರಯೋಜನವಿಲ್ಲ!!!

ನಿಶಾನಿ ಮೊಟ್ಟೆ ಟ್ರೆಕ್

ನಿಶಾನಿ ಮೊಟ್ಟೆ ಒಂದು ಸುಂದರವಾದ ಚಾರಣವಾಗಿದ್ದು ಅದು ನಿಮ್ಮನ್ನು ಬೆಟ್ಟದ ತುದಿಗೆ ಕರೆದೊಯ್ಯುತ್ತದೆ ಮತ್ತು ಬ್ರಹ್ಮಗಿರಿ ಶ್ರೇಣಿಯ ಅದ್ಭುತ ನೋಟವನ್ನು ನೀಡುತ್ತದೆ. ಬೇರೆ ಟ್ರೆಕಿಂಗ್ ಸ್ಥಳಗಳಿಗೆ ಹೋಲಿಸಿದರೆ ಇದು ಸ್ವಲ್ಪ ಸುಲಭವಾಗಿ ತಲುಪುವ ಟ್ರೆಕಿಂಗ್ ಆಗಿದೆ. ಇದು ಕರ್ನಾಟಕದ ಪಶ್ಚಿಮ ಘಟ್ಟಗಳ ಬಳಿ ಇರುವ ತಲಕಾವೇರಿ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ. ಹಸಿರು ಹಾಸಿಗೆಯ ಮೇಲೆ ನಡೆದು ಸಾಗುವ ದಾರಿ ದೇಹದ ದಣಿವನ್ನು ಇಳಿಸಿ ಮನಸ್ಸಿಗೆ ಇನ್ನಷ್ಟು ಸ್ಪೂರ್ತಿ ನೀಡುತ್ತದೆ. ದಾರಿಯುದ್ದಕ್ಕೂ, ನೀವು ಜಲಪಾತಗಳು ಮತ್ತು ತೊರೆಗಳನ್ನು ಕಾಣಬಹುದು. ಈ ಚಾರಣದ ಪ್ರಮುಖ ಅಂಶವೆಂದರೆ ನೀವು ಅಗತ್ಯ ಅನುಮತಿಗಳೊಂದಿಗೆ ಅರಣ್ಯದ ಚೆಕ್‌ಪಾಯಿಂಟ್‌ನಲ್ಲಿ ಕ್ಯಾಂಪ್ ಮಾಡಬಹುದು.

ಬೆಂಗಳೂರಿನಿಂದ 297 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 15 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಶರತ್ಕಾಲ ಮತ್ತು ಚಳಿಗಾಲ

ಬಾಬಾಬುಡನ್ ಗಿರಿ

ನೀವು ಹಾರ್ಡ್‌ಕೋರ್ ಸಾಹಸ ಫ್ರೀಕ್ ಆಗಿರಲಿ, ಪ್ರಯಾಣಿಕರಾಗಿರಲಿ ಅಥವಾ ಪ್ರಕೃತಿಯನ್ನು ಪ್ರೀತಿಸುವವರಾಗಿರಲಿ, ಬಾಬಾ ಬುಡನ್‌ಗಿರಿ ನಿಮ್ಮ ಮನ ಗೆಲ್ಲುದರಲ್ಲಿ ಯಾವುದೇ ಸಂದೇಹವಿಲ್ಲ. ಬಾಬಾಬುಡನ್ ಗಿರಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಇರುವ ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದಾಗಿದೆ. ಈ ಶಿಖರದ ಹಸಿರು ಗುಡ್ಡಗಳು, ಮರಗಳ ಸಾಲುಗಳು ಮತ್ತು ಹುಲ್ಲು ಹಾಸಿಗೆ ಕಣ್ಣ್ ತುಂಬಿದಂತೆ ದೀರ್ಘವಾಗಿ ಉಸಿರೆಳೆದುಕೊಂಡು ಪರಿಶುದ್ಧ ಗಾಳಿಯ ಅನುಭವ ನೀಡುತ್ತದೆ. ಇದು ಪುರಾತನ ದೇವಾಲಯವಾದ ದತ್ತಾತ್ರೇಯ ದೇವಸ್ಥಾನಕ್ಕೆ ನೆಲೆಯಾಗಿದೆ. ಇಲ್ಲಿಗೆ ಹಲವಾರು ಯಾತ್ರಿಕರು ಕಾಲುನಡಿಗೆಯಲ್ಲಿ ಬಂದು ದತ್ತಾತ್ರೇಯನ ದರ್ಶನ ಪಡೆಯುವವರು. ಈ ಪ್ರದೇಶವು ಸಾಹಸಿಗರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣವಾಗಿದೆ.

ಬೆಂಗಳೂರಿನಿಂದ 276 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 9 – 10 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ ನಿಂದ ಮಾರ್ಚ್

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಚಾರಣವು ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು ಈ ಶಿಖರವನ್ನು ಸ್ವರ್ಗದ ಮೆಟ್ಟಿಲು ಅಂತಾನೂ ಕರೆಯುತ್ತಾರೆ. ಸುತ್ತಲೂ ಮಂಜು ಕವಿದಾಗ ಶಿಖರದ ಮೆಟ್ಟಿಲುಗಳು ಮಾತ್ರ ಕಣ್ಣಿಗೆ ಕಾಣಿಸುವುದು ಆ ಮೆಟ್ಟಿಲುಗಳನ್ನು ಹತ್ತುವಾಗ ಮೋಡಗಳ ಮಧ್ಯದಲ್ಲಿನ ಮೆಟ್ಟಿಲುಗಳನ್ನು ಹತ್ತಿ ಸ್ವರ್ಗಕ್ಕೆ ಹೋಗುವ ಭಾವ ಮೂಡುತ್ತದೆ. ಹಾಗಾಗಿ ಸ್ವರ್ಗದ ಮೆಟ್ಟಿಲು ಎಂದು ಕರೆಯುತ್ತಾರೆ. ಚಾರಣದ ತುತ್ತತುದಿಗೆ ತಲುಪಿದಾಗ “ಮುಳಪ್ಪ ಸ್ವಾಮಿ”ಯ ದೇವಸ್ಥಾನ ಸಿಗುತ್ತದೆ. ಜೀವನದಲ್ಲಿ ಸ್ವರ್ಗದ ಮೆಟ್ಟಿಲು ಹತ್ತುವ ಮುನ್ನ ಒಮ್ಮೆ ಆದರೂ ಮುಳ್ಳಯ್ಯನಗಿರಿ ಸ್ವರ್ಗದ ಮೆಟ್ಟಿಲು ಹತ್ತಲೇ ಬೇಕು. ಈ ಎಲ್ಲ ಕಾರಣಗಳಿಂದ ಮುಳ್ಳಯ್ಯನಗಿರಿ ಕರ್ನಾಟಕದ 7 ಅತ್ಯದ್ಭುತ ಟ್ರಕ್ಕಿಂಗ್ ತಾಣಗಳಲ್ಲಿ ಒಂದಾಗಿದೆ.

ಬೆಂಗಳೂರಿನಿಂದ 240 ಕಿಲೋಮೀಟರ್

ಟ್ರೆಕಿಂಗ್ ನ ಅಂತರ: 4-5 ಕಿಮೀ

ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ – ಫೆಬ್ರವರಿ

ನಿಮ್ಮ ಟ್ರೆಕ್ಕಿಂಗ್ ಸುಖಕರವಾಗಿರಲಿ…

Related posts