ಸಿನಿಮಾ ಇಂಡಸ್ಟ್ರಿ ಗೆ ಗುಡ್ ಬೈ ಹೇಳದ್ರ ಕಿಚ್ಚ?

ಸಿನಿಮಾ ಬಿಟ್ಟು ಕಿಚ್ಚ ಹೋಟೆಲ್ ಇಟ್ರಾ?

ಹೌದು, ಕಿಚ್ಚ ಸುದೀಪ್ ಅವರಿಗೆ ಹೋಟೆಲ್ ಉದ್ಯಮ ಏನು ಹೊಸತಲ್ಲ,ಅವರ ತಂದೆ ಫೇಮಸ್ ಹೋಟೆಲ್ ಆಗಿದ್ದ ಸರೋವರ ಎಂಬ ಹೋಟೆಲ್ ನಡೆಸುತ್ತಿದ್ದರು. ಈಗ ಸುದೀಪ್ ಕೂಡ ಅದೇ ದಾರಿ ಹಿಡಿದಿದ್ದಾರೆ. ಕಿಚ್ಚ ಕೂಡ ಅಡುಗೆ ಮಾಡೋದ್ರಲ್ಲಿ ಏನು ಕಡಿಮೆ ಇಲ್ಲ, ಬಿಗ್ ಬಾಸ್ ರಿಯಾಲಿಟಿ ಷೋಗಳಲ್ಲಿ ಕಾಂಟೆಸ್ಟಂಟ್ ಗಳಿಗೆ ತನ್ನ ಕೈ ರುಚಿ ಉಣಬಡಿಸಿದ್ದರು ಮತ್ತು ಅದು ಅವರ ಹವ್ಯಾಸಗಳಲ್ಲಿ ಒಂದು. ಕಾಫಿ & ಬನ್ಸ್ ಎಂಬ ಹೋಟೆಲ್ ಶುರು ಮಾಡೋದಕ್ಕೆ ಎಲ್ಲ ರೆಡಿ ಮಾಡ್ಕೊಂಡ್ ಇದ್ದಾರೆ. ಇತ್ತೀಚಿಗೆ ನಡೆದ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದ ವೇಳೆ ಮೀಡಿಯಾಗಳ ಮುಂದೆ ಸುದೀಪ್ ಈ ಹೊಸ ಸುದ್ದಿಯನ್ನು ಹೊರಹಾಕಿದ್ದರು.

ಹಾಗಾದರೆ ಕಾಫಿ & ಬನ್ಸ್ ವಿಶೇಷತೆ ಏನು ಎಂಬ ನಿಮ್ಮೆಲ್ಲರ ಪ್ರಶ್ನೆ ಗೆ ಉತ್ತರ, ಕಾಫಿ & ಬನ್ಸ್ ಎಂಬ ಕಾರ್ಪೊರೇಟ್ ಹೋಟೆಲ್ ಉದ್ಯಮ ಹುಟ್ಟು ಹಾಕಿದ್ದು ಇದರ ಸಂಪೂರ್ಣ ಜವಾಬ್ದಾರಿ ಕಿಚ್ಚನ ಪತ್ಮಿ ಪ್ರಿಯ ಸುದೀಪ್ ಅವರು ತೆಗೆದುಕೊಂಡಿದ್ದು. ಈ ಹೊಸ ಉದ್ಯಮ ಕಿಚ್ಚನ ಮಗು ಆಗಿದ್ದು ಇದನ್ನು ಕ್ರಿಯೇಟಿವ್ ಆಗಿ ಜನರ ಮುಂದೆ ಇಡುವೆವು ಎಂದು ಭರವಸೆ ನೀಡಿದರು.

ಹಾಗಾದರೆ ಕಿಚ್ಚ, ಸಿನಿಮಾ ಇಂಡಸ್ಟ್ರಿ ಬಿಟ್ಟು ಬಿಟ್ರಾ?

ಖಂಡಿತಾ ಇಲ್ಲ, ಸುದೀಪ್ ಕಾಫಿ & ಬನ್ಸ್ ಪೂರ್ತಿ ಜವಾಬ್ದಾರಿ ಪ್ರಿಯ ಸುದೀಪ್ ಅವರಿಗೆ ನೀಡಿದ್ದು. ತನ್ನ ಅಭಿಮಾನಿಗಳಿಗಾಗಿ ಸಿನಿಮಾ ಮಾಡುವುದನ್ನು ಮುಂದುವರೆಸಿದ್ದಾರೆ. ರಿಯಾಲಿಟಿ ಷೋ, ಕ್ರಿಕೆಟ್, ಫ್ಯಾಮಿಲಿ ಮತ್ತು ಇನ್ನಿತರ ಉದ್ಯಮಗಲ್ಲಿ ಬಾಗಿ ಆಗಿದ್ದರು ಕೂಡ ಎಂದಿಗೂ ಅವರು ಸಿನಿ ರಸಿಕರಿಗೆ ನಿರಾಸೆ ಮೂಡಿಸಿಲ್ಲ. ಅವರ ಅಭಿಮಾನಿಗಳು ವಿಕ್ರಾಂತ ರೋಣ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

Related posts