ಈ 50 ಅಪಾಯಕಾರಿ ಆ್ಯಪ್​ ನಿಮ್ಮ ಮೊಬೈಲ್ ಅಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ

ಪ್ಲೇ ಸ್ಟೋರ್​ನಿಂದ 50 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

ಗೂಗಲ್ ಸೇಫ್ ಇಲ್ಲದ ಆ್ಯಪ್​ಗಳನ್ನು ತನ್ನ ಪ್ಲೇ ಸ್ಟೋರ್​ಗೆ ಸೇರಿಸಿಕೊಳ್ಳುದಿಲ್ಲ. ಗೂಗಲ್ ಪ್ಲೇ ಸ್ಟೋರ್ ಗೆ ಒಂದು ಆ್ಯಪ್ ಸೇರ್ಪಡೆ ಆಗಬೇಕೆಂದರೆ ಅದು ಗೂಗಲ್ ಪ್ಲೇ ಸ್ಟೋರ್ ನ ಹಲವು ನಿಯಮಗಳನ್ನು ಪಾಲಿಸಿರಬೇಕು. ಇಷ್ಟೆಲ್ಲ ಕಂಡೀಶನ್ ಗಳು ಇದ್ದರು ಕೆಲವು ಆ್ಯಪ್ ಗಳು ಸೇರ್ಪಡೆಯ ನಂತರ ತಮ್ಮ ಆ್ಯಪ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆ್ಯಪ್ ಬಳಸುವವರ ಡೇಟಾ ಕದಿಯುವುದು ಹಾಗು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಹಾಗಾಗಿ ಗೂಗಲ್ ಹೊಸ ಪಟ್ಟಿ ಒಂದು ಸಿದ್ದ ಮಾಡಿದ್ದೂ ಅದರಲ್ಲಿ 50 ಅಪಾಯಕಾರಿ ಅಪ್ಲಿಕೇಶನ್‌ಗಳಿದ್ದು ಈ ಆ್ಯಪ್ ಗಳು ನಿಮ್ಮ ಡಿವೈಸ್ ಅಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ.

ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone) ನಲ್ಲಿ ಬಳಸುವ ಆ್ಯಪ್ ಗಳ ಬಗ್ಗೆ ಆದಷ್ಟು ಜಾಗರೂಕತೆ ಇಂದ ಇರಬೇಕು. ಆ್ಯಪ್ ಗಳಿಗೆ ಪರ್ಮಿಷನ್ ಕೊಡುವ ವೇಳೆ ಅದು ಅವಶ್ಯಕತೆ ಇದ್ದರೆ ಮಾತ್ರ ಕೊಡಬೇಕು ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಡೇಟಾ ಕದಿಯುವ ಸಾಧ್ಯತೆ ಇರುತ್ತದೆ. ಪಟ್ಟಿಯಲ್ಲಿರುವ 50 ಅಪ್ಲಿಕೇಶನ್ ಅಲ್ಲಿ ಗೂಗಲ್ ಅಪಾಯಕಾರಿ ಮಾಲ್ವೇರ್ ಗಳನ್ನೂ ಪತ್ತೆ ಮಾಡಿದೆ. ಹಾಗಾಗಿ ಗೂಗಲ್ ಪಟ್ಟಿ ಮಾಡಿರುವ ಈ 50 ಅಪ್ಲಿಕೇಶನ್​​​ಗಳು ನಿಮ್ಮ ಮೊಬೈಲ್ ನಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಡಿಲೀಟ್ ಮಾಡಿ.

Pile of 3D Popular Social Media Logos

Zscaler ಎಂಬ ಸೆಕ್ಯೂರಿಟಿ ಕಂಪನಿ ಈ ಆ್ಯಪ್ ಗಳ ಬಗ್ಗೆ ಮಾಹಿತಿ ನೀಡಿದ್ದು ಜೋಕರ್, ಫೇಸ್​ಸ್ಟೀಲರ್ ಹಾಗೂ ಕಾಪರ್ ಎಂಬ ಮೂರು ಅಪಾಯಕಾರಿ ಮಾಲ್ವೆರ್​ಗಳಿಂದ ಮೊಬೈಲ್ ಡಿವೈಸ್ ಗಳಿಗೆ ಅಪಾಯ ಇದೆ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನ ಆ್ಯಪ್​ಗಳು ಜೋಕರ್ ಮಾಲ್ವೆರ್ ಮೂಲಕ ಕೆಲಸ ಮಾಡುತ್ತದಂತೆ. ಇದು ಬಳಕೆದಾರರ ಎಸ್​ಎಮ್​ಎಸ್ ಮಾಹಿತಿ, ಕಾಂಟೆಕ್ಟ್​ ಲಿಸ್ಟ್, ನಿಮ್ಮ ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ.

ಗೂಗಲ್ ಅಪಾಯಕಾರಿ 50 ಆ್ಯಪ್​ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ಡಿಲೀಟ್ ಮಾಡಿದ್ದು. ಇನ್ನು ಈಗಾಗಲೇ ಅದನ್ನು ಡೌನ್​ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ.

-Simple Note Scanner

-Universal PDF Scanner

-Private Messenger

-Premium SMS

-Smart Messages

-Text Emoji SMS

-Blood Pressure Checker

-Funny Keyboard

-Memory Silent Camera

-Custom Themed Keyboard

-Light Messages

-Themes Photo Keyboard

-Send SMS

-Themes Chat Messenger

-Instant Messenger

-Cool Keyboard

-Fonts Emoji Keyboard

-Mini PDF Scanner

-Smart SMS Messages

-Creative Emoji Keyboard

-Fancy SMS

-Fonts Emoji Keyboard

-Personal Message

-Funny Emoji Message

-Magic Photo Editor

-Professional Messages

-All Photo Translator

-Chat SMS

-Smile Emoji

-Wow Translator

-All Language Translate

-Cool Messages

-Blood Pressure Diary

-Chat Text SMS

-Hi Text SMS

-Emoji Theme Keyboard

-iMessager

-Text SMS

-Camera Translator

-Come Messages

-Painting Photo Editor

-Rich Theme Message

-Quick Talk Message

-Advanced SMS

-Professional Messenger

-Classic Game Messenger

-Style Message

-Private Game Messages

-Timestamp Camera

Related posts