ಕೊನೆಗೂ ಫಿಕ್ಸ್ ಆಯ್ತಾ ನಿತ್ಯಾ ಮೆನನ್ ಮದುವೆ? ಯಾರು ಆ ದೊಡ್ಡ ನಟ?

ಮಲಯಾಳಂ ಸೂಪರ್ ಸ್ಟಾರ್ ಜೊತೆ ನಿತ್ಯಾ ಮೆನನ್ ಮದುವೆ?

ನಿತ್ಯಾ ಮೆನನ್ ಅವರಿಗೆ ಎಲ್ಲ ಭಾಷೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು. ಅವರ ಕ್ಯೂಟ್ ಸ್ಮೈಲ್ ಗೆ ಯಾರು ತಾನೇ ಫಿದಾ ಆಗಲ್ಲ ಹೇಳಿ. ಯಾವ ಇಂಟರ್ವ್ಯೂಗೆ ಹೋದರು ನಿತ್ಯ ಮೆನನ್ ಅವರಿಗೆ ಎಲ್ಲರೂ ಹೆಚ್ಚಾಗಿ ಕೇಳುವ ಪ್ರಶ್ನೆ ಮದುವೆ ಯಾವಾಗ ಅಂತ. ಇಷ್ಟೊಂದು ಕುತೂಹಲ ಇರುವ ನಿತ್ಯ ಮೆನನ್ ಮಾಡುವೆ ವಿಷ್ಯದ ಬಗ್ಗೆ ಇತ್ತೀಚಿಗೆ ಒಂದು ಗಾಸಿಪ್ ಹರಿದಾಡುತ್ತಿದ್ದು. ಅವರಿಗೆ ಮಲಯಾಳಂ ನ ನಟನ ಜೊತೆ ಮಾಡುವೆ ಫಿಕ್ಸ್ ಆಗಿದೆ ಇನ್ನೇನು ಮಾಡುವೆ ಆಗೇ ಬಿಡುತ್ತಾರೆ ಎಂದು ಸುದ್ದಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಅಷ್ಟಕ್ಕೇ ನಿಲ್ಲದೆ ನಿತ್ಯ ಮೆನನ್ ಮಾಡುವೆ ಆಗುತ್ತಿರುವ ನಟ ಯಾರ್ ಇರಬೊಹುದೆಂದು ಕುತೂಹಲ ಹುಟ್ಟು ಹಾಕಿತ್ತು. ಅವರ ಸಾಕಷ್ಟು ಅಭಿಮಾನಿಗಳು ಇದರ ಬಗ್ಗೆ ಗೂಗಲ್ ಅಲ್ಲಿ ಸರ್ಚ್ ಮಾಡಿದ್ದರು. .

ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಕನ್ನಡದ ಮಂದಿಗೂ ಅವರು ಚಿರಪರಿಚಿತರು. ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 2’ ಚಿತ್ರಕ್ಕೆ ಅವರೇ ನಾಯಕಿ ಆಗಿದ್ದರು. ಈ ಚಿತ್ರ 2016ರಲ್ಲಿ ತರೆಗೆ ಬಂತು. ಇದಾದ ಬಳಿಕ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಅವರಿಗೆ ಪರಭಾಷೆಯಲ್ಲಿಯೂ ಸಖತ್ ಬೇಡಿಕೆ ಇದೆ. ಈ ಮಧ್ಯೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈಗ ನಿತ್ಯಾ ಮೆನನ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಿತ್ಯಾ ಮೆನನ್ ಮಲಯಾಳಂ ನಟನ ಜೊತೆ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದಂತೆ, ಈ ವಿಷಯವನ್ನು ಕೇಳಿ ಅವರು ತುಂಬ ಬೇಸರ ವ್ಯಕ್ತಪಡಿಸಿದ್ದು. ‘ಮಲಯಾಳಂ ನಟನ ಜತೆ ಮದುವೆ ಆಗುತ್ತಿದ್ದೇನೆ ಎನ್ನುವ ಸುದ್ದಿ ಸುಳ್ಳು, ಆ ಸುದ್ದಿ ನಿಜವಲ್ಲ ಅಂತಹ ಯಾವದೇ ನಿರ್ಧಾರ ತೆಗೆದುಕೊಂಡಾಗ ನಾನೇ ಖುದ್ದಾಗಿ ಸಂತೋಷದಿಂದ ನನ್ನ ಅಭಿಮಾನಿಗಳ ಬಳಿ ಹೇಳಿಕೊಳ್ಳುತ್ತೇನೆ ಎಂದರು.

ನಿತ್ಯಾ ಮೆನನ್ ಅವರು ‘19(1)(ಎ)’ ಚಿತ್ರದ ನಟನೆಯಲ್ಲಿ ಬ್ಯುಸಿ ಆಗಿದ್ದು ಈಗಾಗಲೇ ಈ ಚಿತ್ರದ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು. ಇಂದು ವಿ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ ಇಂದ್ರಜಿತ್ ಸುಕುಮಾರನ್ ಕೂಡ ನಟಿಸಿದ್ದಾರೆ.

Related posts