ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

ಸಿದ್ದುಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್

2023ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly Election) ಎಲ್ಲ ಪಕ್ಷಗಳಿಂದ ಭರ್ಜರಿ ಸಿದ್ಧತೆ ನಡಿಯುತ್ತಿದೆ. ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇರುವಾಗಲೇ ಈಗಿನಿಂದಲೇ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಶುರುಮಾಡಿಕೊಡಿದ್ದಾರೆ ಇನ್ನು ಈ ಬಾರಿ ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಒಳಒಳಗೆ ಪೈಪೋಟಿ ನಡೆಯುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಒಂದು ಬಣ ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರೆ ಇನ್ನೊಂದು ಬಣ ಡಿಕೆ ಶಿವಕುಮಾರ್ ಆಗಬೇಕೆಂದು ಹಠ ಹಿಡಿಯುತ್ತಿದ್ದಾರೆ. ಕಾರ್ಯಕರ್ತರ ನಡುವೆ ಈ ತಿಕ್ಕಾಟ ಇದ್ದರು ಇವರಿಬ್ಬರು ಈ ವಿಷಯಗಳ ಬಗ್ಗೆ ಇನ್ನು ತುಟಿ ಬಿಚ್ಚಿರಲಿಲ್ಲ. ಇಂದು ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಇಂಡೈರೆಕ್ಟ್ ಆಗಿ ಸಿದ್ದುಗೆ ಟಾಂಗ್ ಕೊಡುವ ಮೂಲಕ ತನಗೆ ಸಿಎಂ ಆಗುವ ಅಸೆ ಇದೆ ಎಂದು ಗಂಟಾಘೋಷವಾಗಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿರುವ ಡಿಕೆಶಿ, ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ತಾಯಿಯ ಸನ್ನಿಧಿಯಿಂದ ಕೇಳುತ್ತಿದ್ದೇನೆ, ನನಗೂ ಅವಕಾಶ ಮಾಡಿಕೊಡಿ ಎಂದು ಹೇಳಿಕೆ ನೀಡಿದ್ದಾರೆ.

ಮುಂದಿನ ಸಿಎಂ ಸಿದ್ದರಾಮಯ್ಯ ನಾ? ಡಿಕೆ ಶಿವಕುಮಾರ?

ನನಗೆ ಹೂವಿನ ಹಾರ ಬೇಡ. ನಾನು ಯಾರನ್ನು ನಿಲ್ಲಿಸುತ್ತೆನೆ ಅವರಿಗೆ ಸಹಕಾರ ಕೊಟ್ಟು ಗೆಲ್ಲಿಸಿ ಎಂದು ಕೇಳಿಕೊಂಡರು. ನನ್ನನು ನೀವು ಆಶೀರ್ವದಿಸಿ ಈ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದುರು. ನಿಮ್ಮ ಮನೆ ಮಗ ಅಧಿಕಾರಕ್ಕೆ ಬರಬೇಕೆಂಬ ಆಸೆ ನಿಮಗೆ ಇದ್ದರೇ ನನ್ನನ್ನು ಗೆಲ್ಲಿಸಿ, ನಾನು ಈ ಬೆಲೆ ಏರಿಕೆ ಇಂದ ನಿಮ್ಮನು ಪಾರುಮಾಡುತ್ತೇನೆ. ಈ ಬಾರಿ ಒಂದು ಅವಕಾಶ ಮಾಡಿಕೊಡಿ ಎಂದು ಕೇಳುವ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Related posts